Anil kumble ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Anil kumble ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

8/23/2020

ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!

  IPL ಟೂರ್ನಿ ರಂಗು ಕಳೆಗಟ್ಟಿದೆ. ಭಾರತದಲ್ಲಿ 13ನೇ ಆವೃತ್ತಿ IPL ಟೂರ್ನಿ ನಡೆಯದಿದ್ದರೂ ಭಾರತೀಯರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಕಾರಣ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗುತ್ತಿರುವ ಐಪಿಎಲ್ ಟೂರ್ನಿಗಾಗಿ ಇದೀಗ 8 ತಂಡಗಳು ದುಬೈಗೆ ತೆರಳಿದೆ. RCB ಕೂಡ ದುಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದೆ. ಇದೀಗ ದುಬೈನಲ್ಲಿರುವ RCB ತಂಡದ ಜೊತೆಗೆ ಫೇವರಿಟ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ,ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಸೇರಿಕೊಂಡಿದ್ದಾರೆ.


ಶುಕ್ರವಾರ(ಆ.21) ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಸೌತ್ ಆಫ್ರಿಕಾದಿಂದ ಆಗಮಿಸಿದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7 ದಿನಗಳ ಕಾಲ ಐಪಿಎಲ್ ತಂಡದ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.

ಹೊಸ ಮಾರ್ಗಸೂಚಿ, ನಿಯಮ ಹಾಗೂ ಮುಂಜಾಗ್ರತೆಗಳಿಂದ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಪ್ರಯಾಣ ಮಾಡಿದಂತೆ ಸಾಧ್ಯವಿಲ್ಲ. ಕೊರೋನಾ ವೈರಸ್ ಕಾರಣ ಎಚ್ಚರ ವಹಿಸಬೇಕಿದೆ. ಸದ್ಯ ಐಪಿಲ್ ಟೂರ್ನಿಗಾಗಿ ದುಬೈಗೆ ಆಗಮಿಸಿರುವುದು ಸಂತಸ ತಂದಿದೆ. ಉತ್ತಮ ಟೂರ್ನಿಯನ್ನು ಎದುರನೋಡುತ್ತಿದ್ದೇನೆ. ಜೊತೆಗೆ ತಂಡ ಸೇರಿಕೊಂಡಿರುವ ಹೊಸ ಮುಖಗಳನ್ನು ನೋಡಲು, ಅವರ ಜೊತೆ ಒಟ್ಟಾಗಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ತಂಡದ ವೇಗಿ ಡೇಲ್ ಸ್ಟೇನ್ ಕೂಡ ಮತ್ತೆ ಆರ್‌ಸಿಬಿ ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಉಷ್ಣತೆ ಇದೆ. ಈ ಬಿಸಿ ವಾತಾವರಣದಲ್ಲಿ ಪ್ರದರ್ಶನ ಸವಾಲಿನ ಕೆಲಸ ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. 

ಹಾಲಿ ಟೀಂ ಇಂಡಿಯಾ VS ಮಾಜಿ ಕ್ರಿಕೆಟರ್ಸ್ ಚಾರಿಟಿ ಪಂದ್ಯ: ದಿಗ್ಗಜರ ತಂಡ ಪ್ರಕಟಿಸಿದ ಇರ್ಫಾನ್!

 ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.


ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.

ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್‌ ಸ್ಥಾನ ಪಡೆದಿಲ್ಲ. ಕಾರಣ ಸಚಿನ್‌ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.

ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ

8/22/2020

ನಿವೃತ್ತಿಯಿಂದ ವಾಪಸ್ ಬನ್ನಿ: ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮನವಿ

 ಮುಂಬೈ: 2011 ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ವರ್ಷವಾಗುತ್ತಿದೆ. ಈ ನಡುವೆ ಅವರ ತವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ನಿವೃತ್ತಿ ನಿರ್ಧಾರದಿಂದ ಹಿಂದೆ ಬರುವಂತೆ ಒತ್ತಾಯಿಸಿದೆ.


ನಿವೃತ್ತಿಯಿಂದ ಹಿಂದೆ ಬಂದು ಮತ್ತೆ ತವರು ಪಂಜಾಬ್ ಪರ ಆಡುವಂತೆ ಕಾರ್ಯದರ್ಶಿ ಪುನೀತ್ ಬಾಲಿ ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಯುವಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಂಜಾಬ್ ತಂಡಕ್ಕೆ ಈಗ ಅನುಭವಿ ಆಟಗಾರರ ಕೊರತೆಯಿದೆ. ಯುವರಾಜ್ ರಂತಹ ಆಟಗಾರರು ಕಣಕ್ಕೆ ಇಳಿದರೆ ಪಂಜಾಬ್ ತಂಡ ಬಲಗೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ಅದೇ ಕಾರಣಕ್ಕೆ ಯುವಿಗೆ ನಿವೃತ್ತಿ ಬಿಟ್ಟು ವಾಪಸ್ ತಂಡಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

8/10/2020

ಐಪಿಎಲ್‌ | ಮಾಸಾಂತ್ಯದಲ್ಲಿ ಯುಎಇಗೆ ಪಯಣಿಸಲಿರುವ ಆರ್‌ಸಿಬಿ

 ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಈ ಮಾಸಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಲಿದೆ.


ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಅದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಆಡಲಿದೆ.



ಐಪಿಎಲ್‌ ತಂಡಗಳಿಗಾಗಿ ಬಿಸಿಸಿಐ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರ ಅನ್ವಯ ಆರ್‌ಸಿಬಿ ತಂಡ, ಪ್ರ ಯಾಣಕ್ಕೂ ಮುನ್ನ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಪೂರೈಸಲಿದೆ. 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರನ್ನು ಮುಂಬೈನ ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಯುಎಇಗೆ ತೆರಳುವ ಮುನ್ನ ಕೆಲವು ದಿನಗಳ ಅಭ್ಯಾಸ ಶಿಬಿರವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ಸದ್ಯ ನಮ್ಮ ಆಟಗಾರರು ಮತ್ತು ಸಿಬ್ಬಂದಿಗೆ ಗೃಹಬಂಧನಕ್ಕಾಗಿ ಹೇಳಲಾಗಿದೆ. ಶೀಘ್ರದಲ್ಲಿಯೇ ಹೋಟೆಲ್ ಕ್ವಾರಂಟೈನ್‌ಗೂ ಒಳಪಡಿಸಲಾಗುವುದು. ಈ ತಿಂಗಳ ಅಂತ್ಯದಲ್ಲಿ ಯುಎಇಗೆ ತೆರಳುವ ಕುರಿತು ಯೋಚಿಸಿದ್ದೇವೆ’ ಎಂದು ಆರ್‌ಸಿಬಿ ಮುಖ್ಯಸ್ಥ ಸಂಜಯ್ ಚೂರಿವಾಲಾ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆಗಸ್ಟ್‌ 14ರಿಂದಲೇ ಹೋಟೆಲ್ ಕ್ವಾರಂಟೈನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಇದರಲ್ಲಿ ವಿದೇಶಿ ಆಟಗಾರರು ಇರುವುದಿಲ್ಲ. ಅವರೆಲ್ಲರೂ ತಮ್ಮ ದೇಶಗಳಿಂದ ನೇರವಾಗಿ ಯುಎಇಗೆ ತೆರಳುವರು.


8/08/2020

ಐಪಿಎಲ್‌ ತಂಡ​ಗ​ಳಿಗೆ 40-50 ಕೋಟಿ ರುಪಾಯಿ ನಷ್ಟ

 ನವ​ದೆ​ಹ​ಲಿ(ಆ.07): ಕೊರೋನಾ ಸಂಕಷ್ಟದ ನಡುವೆಯೂ ಈ ವರ್ಷ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ವ್ಯವಸ್ಥೆ ಮಾಡಿ​ದ್ದರೂ, ಫ್ರಾಂಚೈಸಿ​ಗ​ಳಿಗೆ ದೊಡ್ಡ ನಷ್ಟ ಎದು​ರಾ​ಗ​ಲಿದೆ ಎಂದು ವರ​ದಿ​ಯಾ​ಗಿದೆ. 



ಟೈಟಲ್‌ ಪ್ರಾಯೋ​ಜ​ಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿ​ಸಿ​ಐಗೆ ವಾರ್ಷಿಕ 440 ಕೋಟಿ ರು. ಪಾವ​ತಿ​ಸು​ತ್ತಿತ್ತು. ಇದ​ರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿ​ಸಿಐ, ಫ್ರಾಂಚೈ​ಸಿ​ಗ​ಳಿಗೆ ಹಂಚು​ತ್ತಿತ್ತು. ಅಂದರೆ ಪ್ರತಿ ಫ್ರಾಂಚೈ​ಸಿಗೆ 27.5 ಕೋಟಿ ರು. ಸಿಗು​ತ್ತಿತ್ತು. ಆದರೆ ಈ ವರ್ಷ ವಿವೋ ಪ್ರಾಯೋ​ಜ​ಕತ್ವದಿಂದ ಹಿಂದೆ ಸರಿ​ದಿದ್ದು, ನೂತನ ಪ್ರಾಯೋ​ಜ​ಕತ್ವದ ಮೌಲ್ಯ, ಗರಿಷ್ಠ 300 ಕೋಟಿಯಷ್ಟು ಇರ​ಬ​ಹುದು ಎಂದು ವಿಶ್ಲೇ​ಷಿ​ಸ​ಲಾ​ಗಿದೆ. 

ಹೀಗಾಗಿ, ಫ್ರಾಂಚೈ​ಸಿ​ಗ​ಳಿಗೆ ಏನಿ​ಲ್ಲ​ವೆಂದ​ರೂ 12ರಿಂದ 15 ಕೋಟಿ ರು. ಕಡಿಮೆ ಸಿಗಲಿದೆ. ಜತೆಗೆ ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈ​ಸಿ​ಗ​ಳಿಗೆ ಅಂದಾಜು 25 ಕೋಟಿ ಸಿಗು​ತ್ತಿತ್ತು. ಈ ವರ್ಷ ಪ್ರೇಕ್ಷ​ಕ​ರಿಗೆ ನಿರ್ಬಂಧ ಹೇರ​ಲಿ​ರುವ ಕಾರಣ, ಆ ಮೊತ್ತವೂ ಸಿಗು​ವು​ದಿಲ್ಲ. ಇತರ ಪ್ರಾಯೋ​ಜ​ಕ​ತ್ವದ ಮೌಲ್ಯವೂ ಕಡಿತಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ಭೀತಿಯಿಂದಾಗಿ ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಿಂದ ಯುಎಇಗೆ ಸ್ಥಳಾಂತರವಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ.

8/02/2020

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ನವದೆಹಲಿ: 20,000 ಅಂತಾರಾಷ್ಟ್ರೀಯ ರನ್‌ಗಳು, ಅತ್ಯಧಿಕ ಶತಕ, ಅದ್ಭುತ ಪ್ರದರ್ಶನ ಹೀಗೆ ಎಲ್ಲದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವದಲ್ಲಿನ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ. ಸುಮಾರು 12 ವರ್ಷಗಳ ವೃತ್ತಿ ಜೀವನದಲ್ಲಿ ರನ್ ಮೆಷೀನ್ ಕೊಹ್ಲಿ ಅನೇಕ ದಾಖಲೆಗಳನ್ನು ಮುರಿದ್ದಾರೆ, ಮುರಿಯುತ್ತಾ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಿಟ್ಟರೆ, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿರುವ ಆಲ್ ಟೈಮ್ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವಾರು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾಗಿದೆ. ಇನ್ನಷ್ಟು ದಾಖಲೆಗಳು ಮುರಿವುದರಲ್ಲಿದ್ದಾರೆ. ಇಂಥ ಅಪಾಯಕಾರಿ ಬ್ಯಾಟ್ಸ್‌ಮನ್ ಕೊಹ್ಲಿ ಹಲವಾರು ಅದ್ಭುತ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಮರೆಯಲಾರದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ. ಈ ರೋಚಕ ಪಂದ್ಯ ನಡೆದಿದ್ದು ಭಾರತದ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ.
ಏಕದಿನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ ಯಾವುದು ಅಂತ ನಿಮ್ಮಲ್ಲೇನಾದರೂ ಕೇಳಿದರೆ ಯಾವುದನ್ನು ಆರಿಸುತ್ತೀರಿ? ಆಸ್ಟ್ರೇಲಿಯಾದ ವಿರುದ್ಧ 2013ರಲ್ಲಿ ಜೈಪುರದಲ್ಲಿ ಕೊಹ್ಲಿ ಬಾರಿಸಿದ 52 ಎಸೆತಗಳ ಶತಕ (ಏಕದಿನದಲ್ಲಿ ಭಾರತೀಯ ಬಾರಿಸಿದ ಅತೀ ವೇಗದ ಶತಕ), 2015ರಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ 107 ರನ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 ರನ್, 2015ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬಾರಿಸಿದ್ದ 138 ರನ್. ಇವೆಲ್ಲ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌ಗಳು.
ಕೊಹ್ಲಿಯ ಆಕರ್ಷಕ ಇನ್ನಿಂಗ್ಸ್‌ಗಳಲ್ಲಿ ಒಂದೆಂದರೆ ಪಾಕಿಸ್ತಾನ ವಿರುದ್ಧ ಬಾರಿಸಿದ 183 ಸ್ಫೋಟಕ ರನ್. 2012ರಲ್ಲಿ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಏಷ್ಯಕಪ್‌ 5ನೇ ಪಂದ್ಯದಲ್ಲಿ ಕೊಹ್ಲಿ ವಿರಾಟ್ ರೂಪ ಪ್ರದರ್ಶಿಸಿದ್ದರು. ಕೊಹ್ಲಿಯ ಈ ಸ್ಫೋಟಕ ಇನ್ನಿಂಗ್ಸ್‌, ಹೋಬರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ್ದ 133 ರನ್ ಬಳಿಕ 20 ದಿನಗಳಲ್ಲಿ ಬಂದಿತ್ತು. ಕೊಹ್ಲಿ ಕೊಟ್ಟ ಒಳ್ಳೆಯ ಇನ್ನಿಂಗ್ಸ್‌ಗಳಲ್ಲಿ ಪಾಕ್ ವಿರುದ್ಧದ ಆ ಇನ್ನಿಂಗ್ಸ್ ಮರೆಯಲಾರದ್ದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

7/30/2020

IPL 2020 Final: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ: ಏನದು ಗೊತ್ತೇ?

IPL 2020 Final: ಬಿಸಿಸಿಐ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಏನದು ಈ ಸ್ಟೋರಿ ಓದಿ.





13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳು ಬಿಡುವಿಲ್ಲದೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೇಳುತ್ತಿದೆ.
ಅಲ್ಲದೆ ಬಿಸಿಸಿಐ ಪರಿಹಾರ ಮಾರ್ಗೋಪಾಯಗಳ ಪರಿಶೋಧನೆಯಲ್ಲಿ ತೊಡಗಿದೆ. ಇದಕ್ಕಾಗಿ ತನ್ನದೇಯಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಓಪಿ) ಅನ್ನೂ ಕೂಡ ರೂಪಿಸಿದೆ.
ಯುಎಇನಲ್ಲಿ 51 ದಿನಗಳ ಕಾಲ ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಹಬ್ಬ ಆಯೋಜನೆಯಾಗಿದ್ದು, ಸೆಪ್ಟೆಂಬರ್ 19 ರಿಂದ ಟೂರ್ನಿ ಶುರುವಾಗಿ ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ಆದರೆ, ಸದ್ಯ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಫೈನಲ್ ಕಾದಾಟವನ್ನು ನವೆಂಬರ್ 8ರಿಂದ ನವೆಂಬರ್ 10ಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿ ಪ್ರಸಾರಕರು ಮುಖ್ಯವಾಗಿ ಸ್ಟಾರ್ ಇಂಡಿಯಾವು ದೀಪಾವಳಿ ವಾರವನ್ನು ಇನ್ನಷ್ಟು ಬಳಸಿಕೊಳ್ಳಲು ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ನವೆಂಬರ್​ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾದ್ದರಿಂದ ಐಪಿಎಲ್ ಫೈನಲ್ ಕಾತರತೆಯನ್ನು ಇನ್ನೆರಡು ದಿನ ಮುಂದೂಡಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆಯಲು ಪ್ರಸಾರಕರು ಯೋಚಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ನ. 8ರ ಬದಲು ಐಪಿಎಲ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ನಡೆಯಲಿದೆಯಂತೆ. ಆದರೆ, ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಯುಎಇಯಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ಹೊರಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೂ ಮುನ್ನ ಎರಡೂ ತಂಡಗಳಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿರುವುದರಿಂದ ಭಾರತ ತಂಡದ ಆಟಗಾರರು ಅಲ್ಲಿಗೆ ಮುಂಚಿತವಾಗಿ ತಲುಪಬೇಕಾಗಿದೆ.
ಇನ್ನೂ ಈ ಬಾರಿಯ ಐಪಿಎಲ್ ಪಂದ್ಯಾವಳಿ ಹೇಗಿರದೆ? ಆಟಗಾರರು ಮತ್ತು ಫ್ರ್ಯಾಂಚೈಸಿಗಳು ಹೇಗಿರಬೇಕು? ಎಂಬ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಬಿಸಿಸಿಐ ರೂಪಿಸಿದೆ.
ಪ್ರಮುಖವಾಗಿ ವೀಕ್ಷಕ ವಿವರಣಾಕಾರರು 6 ಅಡಿ ಅಂತರದಲ್ಲಿ ಕುಳಿತುಕೊಳ್ಳಬೇಕು. ಡ್ರೆಸ್ಸಿಂಗ್ ರೂಂನಲ್ಲಿ ಒಂದು ಸಲಕ್ಕೆ 15 ಕ್ಕಿಂತ ಹೆಚ್ಚು ಆಟಗಾರರು ಇರುವಂತಿಲ್ಲ. ಅಲ್ಲದೆ ಪಂದ್ಯಾವಳಿ ವೇಳೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದೆ.


7/28/2020

ಆರ್‌ಸಿಬಿ ಈ ಬಾರಿಯ ಚಾಂಪಿಯನ್: ಬಲಿಷ್ಠ ಕಾರಣಗಳನ್ನು ಹೇಳಿದ ಆಸಿಸ್ ದಿಗ್ಗಜ

ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ನಿರ್ಧಾರ ಪ್ರಕಟಗೊಳಿಸಿದಂತೆಯೇ ಆ ವೇದಿಕೆಯಲ್ಲಿ ಬಿಸಿಸಿಐ ಐಪಿಎಲ್ ನಡೆಸಲು ಸಜ್ಜಾಗಿದೆ. ಈಗಾಗಲೇ ಐಪಿಎಲ್ ಚೇರ್‌ಮನ್ ಬ್ರಿಜೇಶ್ ಪಟೇಲ್ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಐಪಿಎಲ್ ನಡೆಯುವುದನ್ನು ಸ್ಪಷ್ಟಪಡಿಸಿದ್ದಾರೆ.


ಈ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡುವ ಹೇಳಿಕೆಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ನೀಡಿದ್ದಾರೆ. ಕಳೆದ 12 ಐಪಿಎಲ್ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿರುವ ಆರ್‌ಸಿಬಿ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್.

ಆರ್‌ಸಿಬಿ ತಂಡ ಕಾಗದದಲ್ಲಿ ಯಾವಾಗಲೂ ಬಲಿಷ್ಠವಾಗಿಯೇ ಇರುವ ತಂಡ. ಆದರೆ ಆರ್‌ಸಿಬಿಗೆ ಚಾಂಪಿಯನ್ ಆಗುವ ಅವಕಾಶ ಈವರೆಗೆ ದೊರೆತಿಲ್ಲ. ಆದರೆ ಈ ಬಾರಿ ಅದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರುವ ಸಾಧ್ಯತೆಯಿರುವ ಮತ್ತೊಂದು ತಂಡ ಎಂದಿದ್ದಾರೆ ಬ್ರಾಡ್ ಹಾಗ್.

ಆರ್‌ಸಿಬಿ ತಂಡಕ್ಕೆ ಈ ಬಾರಿ ಆರೋನ್ ಫಿಂಚ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಅವರು ಬೌಲರ್‌ಗಳ ಮೇಲೆ ಸವಾರಿ ಮಾಡಲಿದ್ದಾರೆ. ಈ ವೇಳೆ ಸಾಕಷ್ಟು ರನ್ ಗಳಿಸಿ ಮಧ್ಯಮ ಕ್ರಮಾಂಕದ ಒತ್ತಡವನ್ನು ಕಡಿಮೆಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರು ಎದುರಾಳಿಗಳನ್ನು ದಂಡಿಸಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಬಲಿಷ್ಠವಾಗಿದೆ. ಡೇಲ್ ಸ್ಟೇನ್ ಹಾಗೂ ಕೇನ್ ರಿಚರ್ಡ್‌ಸನ್ ತಂ‌ಡದ ಸಮತೋಲನವನ್ನು ಈ ಹಿಂದಿನ ಟೂರ್ನಿಗಿಂತ ಹೆಚ್ಚುಗೊಳಿಸಲಿದ್ದಾರೆ. ಮಾತ್ರವಲ್ಲದೆ ಈ ಹಿಂದಿನ ಟೂರ್ನಿಯಲ್ಲಿ ಮಾಡಿದ ರಣತಂತ್ರಕ್ಕಿಂತ ಬೇರೆಯದ್ದೇ ರಣತಂತ್ರವನ್ನು ಹೆಣೆಯಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.



7/27/2020

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು

ಇಂಡಿಯರ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ. ಅದೊಂದು ಹಬ್ಬವಿದ್ದಂತೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಈಗ ಮುಹೂರ್ತ ಕೂಡಿಬಂದಿದ್ದು ಇದೇ ವರ್ಷ ವಿದೇಶದಲ್ಲಿ ನಡೆಯಲಿದೆ.


ಸೆಪ್ಟೆಂಬರ್ 18ಕ್ಕೆ 13ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ಸಿಗಲಿದ್ದು, ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

    ಇಂಡಿಯರ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ. ಅದೊಂದು ಹಬ್ಬವಿದ್ದಂತೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಈಗ ಮುಹೂರ್ತ ಕೂಡಿಬಂದಿದ್ದು ಇದೇ ವರ್ಷ ವಿದೇಶದಲ್ಲಿ ನಡೆಯಲಿದೆ.


    ಸೆಪ್ಟೆಂಬರ್ 18ಕ್ಕೆ 13ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ಸಿಗಲಿದ್ದು, ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.


    ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.


    ಆದರೆ, ಈ ಬಾರಿ ಸಂಪೂರ್ಣ ಐಪಿಎಲ್ ಟೂರ್ನಿ ಯುಎಇನಲ್ಲೇ ನಡೆಯಲಿದೆ. ಹಾಗಾದ್ರೆ ಕಳೆದ ಬಾರಿ ಯುಎಇನಲ್ಲಿ ಐಪಿಎಲ್ ನಡೆದಾಗ ಯಾವ ಬ್ಯಾಟ್ಸ್​ಮನ್​ ಅಬ್ಬರಿಸಿದ್ದರು? ಈ ಕುರಿತ ಮಾಹಿತಿ ಇಲ್ಲಿವೆ.
    ಮನೀಶ್ ಪಾಂಡೆ: 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದ ಮನೀಶ್ ಪಾಂಡೆ ಅಮೋಘ ಪ್ರದರ್ಶನ ನೀಡಿದ್ದರು.


    ಯುಎಇನಲ್ಲಿ ನಡೆದ 5 ಪಂದ್ಯಗಳಲ್ಲಿ ಪಾಂಡೆ 144 ರನ್ ಬಾರಿಸಿದ್ದರು. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲೇ 64 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.

    ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್ ಅಭಿಯಾನ ಆರಂಭಿಸಿದ ಡೇವಿಡ್ ವಾರ್ನರ್ ತನ್ನ ಚೊಚ್ಚಲ ಸೀಸನ್​ನಲ್ಲೇ ಅಪಾಯಕಾರಿಯಾಗಿ ಗೋಚರಿಸಿದರು.


    ಯುಎಇನಲ್ಲಿ ನಡೆದ ಮೊದಲ 5 ಪಂದ್ಯಗಳಲ್ಲೇ ವಾರ್ನರ್ 163 ರನ್ ಕಲೆಹಾಕಿದರು. 112 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು ಎಂಬುದು ಮತ್ತೊಂದು ವಿಶೇಷ.


    ಆ್ಯರೋನ್ ಫಿಂಚ್: 2014 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಆಸೀಸ್ ಆಟಗಾರ ಆ್ಯರೋನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು.


    ಆಡಿದ 5 ಪಂದ್ಯಗಳಲ್ಲಿ ಫಿಂಚ್ ಅವರು 127 ಸ್ಟ್ರೈಕ್​ರೇಟ್​ನಲ್ಲಿ 169 ರನ್ ಕಲೆಹಾಕಿದ್ದರು. ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಫಿಂಚ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.


    ಅಜಿಂಕ್ಯಾ ರಹಾನೆ: ಪ್ರತಿಭಾನ್ವಿತ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ 2104ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರಹಾನೆ ಮೊದಲ ಎರಡು ಪಂದ್ಯಗಳಲ್ಲೇ ಅರ್ಧಶತಕ ಸಿಡಿಸಿದ್ದರು.


    ಆಡಿದ ಒಟ್ಟು 5 ಪಂದ್ಯಗಳಲ್ಲಿ ರಹಾನೆ 182 ರನ್ ಕಲೆಹಾಕಿ ಗರಿಷ್ಠ ರನ್ ಕಲೆಹಾಕಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.


    ಗ್ಲೆನ್ ಮ್ಯಾಕ್ಸ್​ವೆಲ್​: 2104 ರಲ್ಲಿ ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಆರ್ಭಟಿಸಿದ್ದು ಆಸೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್​ವೆಲ್.


    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದ ಮ್ಯಾಕ್ಸ್​ವೆಲ್​ ಕೇವಲ 5 ಇನ್ನಿಂಗ್ಸ್​ನಲ್ಲಿ 201 ಸ್ಟ್ರೈಕ್​ರೇಟ್​ ಮೂಲಕ 300 ರನ್ ಚಚ್ಚಿದ್ದರು.

    Published by: Vinay Bhat
    First published: July 27, 2020, 12:49 PM IST


    ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

     ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...