13ನೇ ಆವೃತ್ತಿ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಕಾರಣಸದ್ಯ ದುಬೈನಲ್ಲಿ ಬೀಡುಬಿಟ್ಟಿರುವ ಕ್ರಿಕೆಟಿಗರು ಕ್ವಾರಂಟೈನ್‌ನಲ್ಲಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ದುಬೈನಲ್ಲಿ ವೈರಸ್ ನಿಯಂತ್ರಣದಲ್ಲಿದೆ.ಟೂರ್ನಿ ಆರಂಭದ ವೇಳೆ ಕೊರೋನಾ ಪರಿಸ್ಥಿತಿ ಅವಲೋಕರಿಸಲಿದ್ದೇವೆ. ಐಪಿಎಲ್ ಟೂರ್ನಿಯಿಂದ ಕೊರೋನಾ ಹರಡುವಿಕೆ ಅಂಕಿ ಅಂಶ ಪರಿಶೀಲಿಸಲಿದ್ದೇವೆ.ಇದರ ಆಧಾರದಲ್ಲಿ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ದುಬೈ ಸರ್ಕಾರದ ಅನುಮತಿ ಅಗತ್ಯ ಎಂದು ECB ಹೇಳಿದೆ.
This page gives latest and fast update of news in kannada and english sports news, sports news today, sports news malayalam, sports news live, sports news telugu, sports news today malayalam, sports news tamil, sports news in english, sports news 24, sports news channel
8/23/2020
ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ
ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಿದು ಬಂದಿದೆ. ಇದರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ಎಂ ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಶರ್ಮಾ ಜತೆ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!
IPL ಟೂರ್ನಿ ರಂಗು ಕಳೆಗಟ್ಟಿದೆ. ಭಾರತದಲ್ಲಿ 13ನೇ ಆವೃತ್ತಿ IPL ಟೂರ್ನಿ ನಡೆಯದಿದ್ದರೂ ಭಾರತೀಯರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಕಾರಣ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗುತ್ತಿರುವ ಐಪಿಎಲ್ ಟೂರ್ನಿಗಾಗಿ ಇದೀಗ 8 ತಂಡಗಳು ದುಬೈಗೆ ತೆರಳಿದೆ. RCB ಕೂಡ ದುಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದೆ. ಇದೀಗ ದುಬೈನಲ್ಲಿರುವ RCB ತಂಡದ ಜೊತೆಗೆ ಫೇವರಿಟ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ,ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಸೇರಿಕೊಂಡಿದ್ದಾರೆ.
ಶುಕ್ರವಾರ(ಆ.21) ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಸೌತ್ ಆಫ್ರಿಕಾದಿಂದ ಆಗಮಿಸಿದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7 ದಿನಗಳ ಕಾಲ ಐಪಿಎಲ್ ತಂಡದ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.
ಹೊಸ ಮಾರ್ಗಸೂಚಿ, ನಿಯಮ ಹಾಗೂ ಮುಂಜಾಗ್ರತೆಗಳಿಂದ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಪ್ರಯಾಣ ಮಾಡಿದಂತೆ ಸಾಧ್ಯವಿಲ್ಲ. ಕೊರೋನಾ ವೈರಸ್ ಕಾರಣ ಎಚ್ಚರ ವಹಿಸಬೇಕಿದೆ. ಸದ್ಯ ಐಪಿಲ್ ಟೂರ್ನಿಗಾಗಿ ದುಬೈಗೆ ಆಗಮಿಸಿರುವುದು ಸಂತಸ ತಂದಿದೆ. ಉತ್ತಮ ಟೂರ್ನಿಯನ್ನು ಎದುರನೋಡುತ್ತಿದ್ದೇನೆ. ಜೊತೆಗೆ ತಂಡ ಸೇರಿಕೊಂಡಿರುವ ಹೊಸ ಮುಖಗಳನ್ನು ನೋಡಲು, ಅವರ ಜೊತೆ ಒಟ್ಟಾಗಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ತಂಡದ ವೇಗಿ ಡೇಲ್ ಸ್ಟೇನ್ ಕೂಡ ಮತ್ತೆ ಆರ್‌ಸಿಬಿ ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಉಷ್ಣತೆ ಇದೆ. ಈ ಬಿಸಿ ವಾತಾವರಣದಲ್ಲಿ ಪ್ರದರ್ಶನ ಸವಾಲಿನ ಕೆಲಸ ಎಂದಿದ್ದಾರೆ.
ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ.
ಹಾಲಿ ಟೀಂ ಇಂಡಿಯಾ VS ಮಾಜಿ ಕ್ರಿಕೆಟರ್ಸ್ ಚಾರಿಟಿ ಪಂದ್ಯ: ದಿಗ್ಗಜರ ತಂಡ ಪ್ರಕಟಿಸಿದ ಇರ್ಫಾನ್!
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.
ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್ ಸ್ಥಾನ ಪಡೆದಿಲ್ಲ. ಕಾರಣ ಸಚಿನ್ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.
ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ
ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...
- 
ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಐಪಿಎಲ್ ಆರಂಭಕ್ಕಾಗಿ ಕ್ರಿಕೆಟ್ ಆಭಿಮಾನಿಗಳು ಕಾತುರರಾಗ...
 - 
The Indian Premier League's governing council will meet on Saturday via teleconference, followed by a meeting with their primary stakeho...
 

