ಕ್ರಿಕೆಟ್ ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವಾರು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾಗಿದೆ. ಇನ್ನಷ್ಟು ದಾಖಲೆಗಳು ಮುರಿವುದರಲ್ಲಿದ್ದಾರೆ. ಇಂಥ ಅಪಾಯಕಾರಿ ಬ್ಯಾಟ್ಸ್‌ಮನ್ ಕೊಹ್ಲಿ ಹಲವಾರು ಅದ್ಭುತ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಮರೆಯಲಾರದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ. ಈ ರೋಚಕ ಪಂದ್ಯ ನಡೆದಿದ್ದು ಭಾರತದ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ.
ಏಕದಿನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ ಯಾವುದು ಅಂತ ನಿಮ್ಮಲ್ಲೇನಾದರೂ ಕೇಳಿದರೆ ಯಾವುದನ್ನು ಆರಿಸುತ್ತೀರಿ? ಆಸ್ಟ್ರೇಲಿಯಾದ ವಿರುದ್ಧ 2013ರಲ್ಲಿ ಜೈಪುರದಲ್ಲಿ ಕೊಹ್ಲಿ ಬಾರಿಸಿದ 52 ಎಸೆತಗಳ ಶತಕ (ಏಕದಿನದಲ್ಲಿ ಭಾರತೀಯ ಬಾರಿಸಿದ ಅತೀ ವೇಗದ ಶತಕ), 2015ರಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ 107 ರನ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 ರನ್, 2015ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬಾರಿಸಿದ್ದ 138 ರನ್. ಇವೆಲ್ಲ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌ಗಳು.
ಕೊಹ್ಲಿಯ ಆಕರ್ಷಕ ಇನ್ನಿಂಗ್ಸ್‌ಗಳಲ್ಲಿ ಒಂದೆಂದರೆ ಪಾಕಿಸ್ತಾನ ವಿರುದ್ಧ ಬಾರಿಸಿದ 183 ಸ್ಫೋಟಕ ರನ್. 2012ರಲ್ಲಿ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಏಷ್ಯಕಪ್ 5ನೇ ಪಂದ್ಯದಲ್ಲಿ ಕೊಹ್ಲಿ ವಿರಾಟ್ ರೂಪ ಪ್ರದರ್ಶಿಸಿದ್ದರು. ಕೊಹ್ಲಿಯ ಈ ಸ್ಫೋಟಕ ಇನ್ನಿಂಗ್ಸ್, ಹೋಬರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ್ದ 133 ರನ್ ಬಳಿಕ 20 ದಿನಗಳಲ್ಲಿ ಬಂದಿತ್ತು. ಕೊಹ್ಲಿ ಕೊಟ್ಟ ಒಳ್ಳೆಯ ಇನ್ನಿಂಗ್ಸ್‌ಗಳಲ್ಲಿ ಪಾಕ್ ವಿರುದ್ಧದ ಆ ಇನ್ನಿಂಗ್ಸ್ ಮರೆಯಲಾರದ್ದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ