ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.
ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್ ಸ್ಥಾನ ಪಡೆದಿಲ್ಲ. ಕಾರಣ ಸಚಿನ್ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.
ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ