7/30/2020

IPL 2020 Final: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ: ಏನದು ಗೊತ್ತೇ?

IPL 2020 Final: ಬಿಸಿಸಿಐ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಏನದು ಈ ಸ್ಟೋರಿ ಓದಿ.





13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳು ಬಿಡುವಿಲ್ಲದೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೇಳುತ್ತಿದೆ.
ಅಲ್ಲದೆ ಬಿಸಿಸಿಐ ಪರಿಹಾರ ಮಾರ್ಗೋಪಾಯಗಳ ಪರಿಶೋಧನೆಯಲ್ಲಿ ತೊಡಗಿದೆ. ಇದಕ್ಕಾಗಿ ತನ್ನದೇಯಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಓಪಿ) ಅನ್ನೂ ಕೂಡ ರೂಪಿಸಿದೆ.
ಯುಎಇನಲ್ಲಿ 51 ದಿನಗಳ ಕಾಲ ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಹಬ್ಬ ಆಯೋಜನೆಯಾಗಿದ್ದು, ಸೆಪ್ಟೆಂಬರ್ 19 ರಿಂದ ಟೂರ್ನಿ ಶುರುವಾಗಿ ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ಆದರೆ, ಸದ್ಯ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಫೈನಲ್ ಕಾದಾಟವನ್ನು ನವೆಂಬರ್ 8ರಿಂದ ನವೆಂಬರ್ 10ಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿ ಪ್ರಸಾರಕರು ಮುಖ್ಯವಾಗಿ ಸ್ಟಾರ್ ಇಂಡಿಯಾವು ದೀಪಾವಳಿ ವಾರವನ್ನು ಇನ್ನಷ್ಟು ಬಳಸಿಕೊಳ್ಳಲು ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ನವೆಂಬರ್​ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾದ್ದರಿಂದ ಐಪಿಎಲ್ ಫೈನಲ್ ಕಾತರತೆಯನ್ನು ಇನ್ನೆರಡು ದಿನ ಮುಂದೂಡಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆಯಲು ಪ್ರಸಾರಕರು ಯೋಚಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ನ. 8ರ ಬದಲು ಐಪಿಎಲ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ನಡೆಯಲಿದೆಯಂತೆ. ಆದರೆ, ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಯುಎಇಯಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ಹೊರಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೂ ಮುನ್ನ ಎರಡೂ ತಂಡಗಳಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿರುವುದರಿಂದ ಭಾರತ ತಂಡದ ಆಟಗಾರರು ಅಲ್ಲಿಗೆ ಮುಂಚಿತವಾಗಿ ತಲುಪಬೇಕಾಗಿದೆ.
ಇನ್ನೂ ಈ ಬಾರಿಯ ಐಪಿಎಲ್ ಪಂದ್ಯಾವಳಿ ಹೇಗಿರದೆ? ಆಟಗಾರರು ಮತ್ತು ಫ್ರ್ಯಾಂಚೈಸಿಗಳು ಹೇಗಿರಬೇಕು? ಎಂಬ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಬಿಸಿಸಿಐ ರೂಪಿಸಿದೆ.
ಪ್ರಮುಖವಾಗಿ ವೀಕ್ಷಕ ವಿವರಣಾಕಾರರು 6 ಅಡಿ ಅಂತರದಲ್ಲಿ ಕುಳಿತುಕೊಳ್ಳಬೇಕು. ಡ್ರೆಸ್ಸಿಂಗ್ ರೂಂನಲ್ಲಿ ಒಂದು ಸಲಕ್ಕೆ 15 ಕ್ಕಿಂತ ಹೆಚ್ಚು ಆಟಗಾರರು ಇರುವಂತಿಲ್ಲ. ಅಲ್ಲದೆ ಪಂದ್ಯಾವಳಿ ವೇಳೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದೆ.


ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...