7/21/2020

ಯುಎಇಯಲ್ಲಿ ಐಪಿಎಲ್: ಶೀಘ್ರದಲ್ಲೇ ವೇಳಾಪಟ್ಟಿ ಸಿದ್ಧ ಎಂದ ಬ್ರಿಜೇಶ್ ಪಟೇಲ್

ನವದೆಹಲಿ:
 ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಗೆ ಚಟುವಟಿಕೆಗಳು ಗರಿಗೆದರಿವೆ

ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ ಟೂರ್ನಿಯನ್ನು ಆಯೋಜಿಸುವುದು ಬಹುತೇಕ ಖಚಿತವಾಗಿದೆ.  ಕೋವಿಡ್ –19 ವೈರಸ್‌ ಉಪಟಳವು ಭಾರತದಲ್ಲಿ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು  ಯುಎಇಯಲ್ಲಿ ನಡೆಸಲು ಬಿಸಿಸಿಐ ಚಿತ್ತ ಹರಿಸಿದೆ.  ಇದರೊಂದಿಗೆ  ಚುಟುಕು ಟೂರ್ನಿ ನಡೆಸುವ ಊಹಾಪೋಹಗಳಿಗೂ ತೆರೆಬಿದ್ದಿದೆ. ಪೂರ್ಣಪ್ರಮಾಣದ ವೇಳಾಪಟ್ಟಿಯೊಂದಿಗೆ ಅಕ್ಟೋಬರ್–ನವೆಂಬರ್‌ನಲ್ಲಿ ಟೂರ್ನಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

‘ಇನ್ನು ಹತ್ತು ದಿನಗಳೊಳಗೆ ಐಪಿಎಲ್ ಸಮಿತಿಯ ಸರ್ವಸದಸ್ಯರ ಸಭೆ ನಡೆಯಲಿದೆ. ಅದರಲ್ಲಿ ಅಂತಿಮ ವೇಳಾಪಟ್ಟಿಯ ಕುರಿತು ನಿರ್ಧರಿಸಲಾಗುವುದು. ಒಟ್ಟು 60 ಪಂದ್ಯಗಳನ್ನು ನಡೆಸಲಾಗುವುದು. ಅದೂ ಯುಎಇಯಲ್ಲಿ‘ ಎಂದು ಐಪಿಎಲ್  ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

‘ಅಲ್ಲಿ ಅಥವಾ ಇಲ್ಲಿ (ಭಾರತ) ಎಲ್ಲಿಯಾದರೂ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿಯೇ ಪಂದ್ಯಗಳು ನಡೆಯಬೇಕು. ಆದ್ದರಿಂದ  ಆಯೋಜಕರ ಕಾರ್ಯಾಚರಣೆಗೆ ಹೆಚ್ಚು ಒತ್ತಡವಿರುವುದಿಲ್ಲ. ಅತ್ಯಗತ್ಯವಾದ ಸಿಬ್ಬಂದಿ, ತಂಡಗಳ ಪ್ರಯಾಣ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ‘ ಎಂದು ಅಭಿಪ್ರಾಯಪಟ್ಟರು

ಆಸ್ಟ್ರೇಲಿಯಾದಲ್ಲಿ  ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಸೋಮವಾರದ ಐಸಿಸಿ ಸಭೆಯಲ್ಲಿ ಮುಂದೂಡಲು ತೀ್ರ್ಮಾನಿಸಲಾಯಿತು. 

ಅದರ ನಂತರ ಐಪಿಎಲ್‌ ಫ್ರ್ಯಾಂಚೈಸ್‌ಗಳ ಮಾಲೀಕರು ಮೈಕೊಡವಿಕೊಂಡು ಎದ್ದಿದ್ದಾರೆ. ತಮ್ಮ ತಂಡಗಳ  ಸಿದ್ಧತೆ, ಪ್ರಯಾಣ ಮತ್ತಿತರ ವ್ಯವಸ್ಥೆಗಳತ್ತ ಚಿತ್ತ ಹರಿಸುತ್ತಿದ್ದಾರೆ.

’ನಮ್ಮ ಆಟಗಾರರಿಗೆ ಕನಿಷ್ಠ 3–4 ವಾರಗಳ ಪೂರ್ವ ಸಿದ್ಧತೆ ತರಬೇತಿ ಬೇಕು. ಬಿಸಿಸಿಐ ಖಚಿತವಾದ ದಿನಾಂಕವನ್ನು  ಪ್ರಕಟಿಸಿದ ಮೇಲೆ ಎಲ್ಲವನ್ನೂ ಸಿದ್ಧತೆ ಮಡಿಕೊಳ್ಳುತ್ತೇವೆ. ಯುಎಇಯಲ್ಲಿ  ಐಪಿಎಲ್ ಆಯೋಜನೆಯಾಗುವುದು ಬಹುತೇಕ ಎನ್ನಲಾಗುತ್ತಿದೆ. ಅದಕ್ಕೂ ನಾವು ಸಿದ್ಧರಿದ್ದೇವೆ‘ ಎಂದು ತಂಡವೊಂದರ ಮಾಲೀಕರು ಹೇಳಿದ್ದಾರೆ. 

ಒಂದೊಮ್ಮೆ ಯುಎಇಯಲ್ಲಿ ಟೂರ್ನಿ ನಡೆದರೆ, ವಿದೇಶಿ ಆಟಗಾರರು ನೇರ ಅಲ್ಲಿಗೇ ಹೋಗಲಿದ್ದಾರೆ. ಅದರಿಂದ ಹೆಚ್ಚು ಅನುಕೂಲವೆನ್ನಲಾಗುತ್ತಿದೆ. ನವೆಂಬರ್‌ನಲ್ಲಿ ಐಪಿಎಲ್ ಮುಗಿದ ನಂತರ ಭಾರತ ತಂಡದ ಆಟಗಾರರು ಅಲ್ಲಿಂದಲೇ ನೇರವಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್ ಸರಣಿಗೆ ತೆರಳಬಹುದು.


ಕಾಮೆಂಟ್‌ಗಳಿಲ್ಲ:

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...