9/29/2020

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆಯೇ ಸಂಜು ಸ್ಯಾಮ್ಸನ್ ಆಟವನ್ನು ಕೇರಳದ ಕಾಂಗ್ರೆಸ್ ಎಂಪಿ ಶಶಿ ತರೂರ್ ಕೂಡ ಕೊಂಡಾಡಿದ್ದರು. ಭವಿಷ್ಯದ ಧೋನಿ ಸಂಜು ಸ್ಯಾಮ್ಸನ್ ಎಂದು ಬಣ್ಣಿಸಿದ್ದರು.


ಆದರೆ ಸಂಜು ಸ್ಯಾಮ್ಸನ್ ಬ್ಯಾಟಿಂಗನ್ನು ಧೋನಿಗೆ ಹೋಲಿಸಿದಕ್ಕೆ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಈಗ ಮತ್ತೋರ್ವ ಕ್ರಿಕೆಟಿಗ ಶ್ರೀಶಾಂತ್ ಕೂಡ ಶಶಿ ತರೂರ್ ಬಣ್ಣನೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆತ ಮುಂದಿನ ಧೋನಿ ಅಲ್ಲ. ಆತ ಏಕೈಕ ಸಂಜು ಸ್ಯಾಮ್ಸನ್ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ

ಶಶಿ ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ಶ್ರೀಶಾಂತ್ "ಆತ ಭವಿಷ್ಯದ ಧೋನಿ ಅಲ್ಲ. ಈತ ಏಕೈಕ ಸಂಜು ಸ್ಯಾಮ್ಸನ್. ಈತ 2015ರಿಂದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಿರಂತರವಾಗಿ ಆಡುತ್ತಿರಬೇಕಾಗಿತ್ತು. ಯಾರೊಂದಿಗೂ ಆತನನ್ನು ಹೋಲಿಕೆ ಮಾಡಬೇಡಿ. ಸರಿಯಾದ ಅವಕಾಶವನ್ನು ಆತನಿಗೆ ನೀಡಿದ್ದರೆ ಭಾರತ ತಂಡಕ್ಕೂ ಇದೇ ರೀತಿ ಆಡುತ್ತಿದ್ದರು ಹಾಗೂ ವಿಶ್ವಕಪ್ ಗೆಲ್ಲುತ್ತಿದ್ದರು" ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.


ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಂಜು ಸ್ಯಾಮ್ಸನ್ ಆಟವನ್ನು ಹೊಗಳುತ್ತಾ ಶಶಿ ತರೂರ್ ''ರಾಜಸ್ಥಾನ್ ರಾಯಲ್ಸ್‌ ಸಂಪೂರ್ಣವಾಗಿ ನಂಬಲಾಗದ ಗೆಲುವು ಕಂಡಿದೆ. ಸಂಜು ಸ್ಯಾಮ್ಸನ್ ಅವರನ್ನು ದಶಕದಿಂದ ತಿಳಿದಿದ್ದೇನೆ. ಆತ 14 ವರ್ಷದವನಿದ್ದಾಗ ಅವನಿಗೆ ನೀನು ಮುಂದಿನ ಧೋನಿ ಆಗಲಿದ್ದೀಯ ಎಂದು ಹೇಳಿದ್ದೆ. ಆ ದಿನ ಇಲ್ಲಿದೆ. ಅವನ ಈ ಎರಡು ಅದ್ಭುತ ಐಪಿಎಲ್ ಇನ್ನಿಂಗ್ಸ್ ವಿಶ್ವ ದರ್ಜೆಯ ಆಟಗಾರನೊಬ್ಬ ಬಂದಿದ್ದಾನೆಂದು ನಿಮಗೆ ತಿಳಿಸುತ್ತಿದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು

.ಇದಕ್ಕೆ ಗೌತಮ್ ಗಂಭೀರ್ "ಸಂಜು ಸ್ಯಾಮ್ಸನ್ ಅವರನ್ನು ಯಾರೊಂದಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್‌ನ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾರೆ ಎಂದು ಟ್ವೀಟ್ ಮೂಲಕ ತರೂರ್ ಬಣ್ಣನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಐಪಿಎಲ್ 2020: ಸಿಕ್ಸ್‌ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ದಾಖಲೆ

 ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಸ್‌ಗಾಗಿ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿ ಶರ್ಮಾ ಗುರುತಿಸಿಕೊಂಡಿದ್ದಾರೆ. ಎಂಐ ಪರ ರೋಹಿತ್ 150 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ.

ಮುಂಬೈ ಇಂಡಿಯನ್ಸ್ ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಪೊಲಾರ್ಡ್ ಒಟ್ಟಾರೆ 151 ಪಂದ್ಯಗಳಲ್ಲಿ 182 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಸೋಮವಾರ (ಸೆಪ್ಟೆಂಬರ್ 8) ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಹಿತ್ 8 ಎಸೆತಗಳಿಗೆ 1 ಸಿಕ್ಸ್‌ ಕೂಡ ಸೇರಿ 8 ರನ್ ಬಾರಿಸಿ ಔಟಾದರು. ಇದರೊಂದಿಗೆ ರೋಹಿತ್ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪಿಸಲ್ಪಟ್ಟಿದೆ.

ಐಪಿಎಲ್‌ನಲ್ಲಿ 200+ ಸಿಕ್ಸರ್‌ಗಳನ್ನು ಬಾರಿಸಿದ 4ನೇ ಬ್ಯಾಟ್ಸ್‌ಮನ್‌ ಆಗಿಯೂ ರೋಹಿತ್ ಗುರುತಿಸಿಕೊಂಡಿದ್ದಾರೆ. ರೋಹಿತ್ ಬಿಟ್ಟರೆ ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಮತ್ತು ಎಂಎಸ್ ಧೋನಿ ಈ ಪಟ್ಟಿಯಲ್ಲಿದ್ದಾರೆ. ಅಂದ್ಹಾಗೆ ಎಂಐ vs ಆರ್‌ಸಿಬಿ ಪಂದ್ಯ 201 ರನ್‌ಗಳಿಂದ ಸಮಬಲಗೊಂಡಿತ್ತು. ಸೂಪರ್ ಓವರ್‌ನಲ್ಲಿ ಬೆಂಗಳೂರು ಗೆದ್ದಿತು.

ಸೂಪರ್ ಓವರ್‌ನಲ್ಲಿ ಡಿವಿಲಿಯರ್ಸ್, ಕೊಹ್ಲಿ ಮೋಡಿ- ಆರ್‌ಸಿಬಿಗೆ ಜಯ

 ದುಬೈ: ಆರಂಭಿಕ ಹಂತದಲ್ಲಿ ಎಡವಿದ್ದ ಮುಂಬೈ ತಂಡವನ್ನು ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಒಂದು ಹಂತಕ್ಕೆ ತಂದಿದ್ದರು. ಆದರೂ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ತಲುಪಿತು. ಸೂಪರ್ ಓವರ್ ನಲ್ಲಿ ಆರ್ ಸಿಬಿ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯಲಕ್ಷ್ಮಿಯನ್ನು ತನ್ನದಾಗಿಸಿಕೊಳ್ಳಿತು.



ಆರ್ ಸಿಬಿ ನೀಡಿದ್ದ 202ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದ ಮೂರು ಓವರ್ ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೂರು ಓವರ್‍ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಮುಗ್ಗರಿಸಿತು. ಆರಂಭಿಕ ಆಟಗಾರ ಕಿಶನ್ 58 ಬಾಲ್‍ಗೆ 99 ರನ್ ಗಳಿಸಿದರು. ಅದ್ಭುತ ಪ್ರದರ್ಶನದಿಂದಾಗಿ ಒಂದು ಹಂತಕ್ಕೆ ತಲುಪಿತು. ಆದರೆ ಕಿಶನ್ ಹಾಗೂ ಪೋಲಾರ್ಡ್ ಪ್ರಯತ್ನ ವಿಫಲವಾಯಿತು. ಹೀಗಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಹಂತ ತಲುಪಿತು.

ಸೂಪರ್ ಓವರ್ ನಲ್ಲಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ಪೋಲಾರ್ಡ್ ನಾಲ್ಕನೇ ಬಾಲ್‍ಗೆ ಫೋರ್ ಬಾರಿಸಿದರೆ, ಐದನೇ ಬಾಲ್‍ಗೆ ಕ್ಯಾಚ್ ನೀಡಿದರು. ನಂತರ 7 ರನ್ ಬಾರಿಸಿ ಆರ್‍ಸಿಬಿಗೆ 8ರನ್‍ಗಳ ಟಾರ್ಗೆಟ್ ನೀಡಿದರು. ಮುಂಬೈ ಪರ ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಟವಾಡಿದರು. ಆರಂಭದ ಎರಡು ಬಾಲ್ ಸಿಂಗಲ್ಸ್ ನಂತರ ನಾಲ್ಕನೇ ಬಾಲ್‍ಗೆ ಡಿವಿಲಿಯರ್ಸ್ ಬೌಂಡರಿ ಬಾರಿಸಿದರು. ಮತ್ತೆ ಐದನೇ ಬಾಲ್ ಸಿಂಗಲ್ ತೆಗೆದುಕೊಂಡರೆ, ಕೊನೆಯ ಬಾಲ್‍ಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.


ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಸೂಪರ್ ಓವರ್ ಕದನದಲ್ಲಿ ಗೆದ್ದ ಬೆಂಗಳೂರು ಕೂಟದ ಎರಡನೇ ಗೆಲುವು ಸಾಧಿಸಿದೆ.



ಆಕರ್ಷಕ ಅರ್ಧಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ನಲ್ಲಿ 4500 ರನ್ ಗಡಿ ದಾಟಿದ ಎರಡನೇ ವಿದೇಶಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳನ್ನು ಎದುರಿಸಿದ ಎಬಿಡಿ ಅಜೇಯ 55 ರನ್ ಬಾರಿಸಿದ್ದರು. ನಾಲ್ಕು ಸಿಕ್ಸರ್ ನಾಲ್ಕು ಬೌಂಡರಿ ಬಾರಿಸಿದ ಎಬಿಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಸಹಾಯಕವಾಗಿದ್ದರು.

ಐಪಿಎಲ್ ನಲ್ಲಿ 4500 ರನ್ ಬಾರಿಸಿದ ಆರನೇ ಆಟಗಾರ, ಎರಡನೇ ವಿದೇಶಿ ಆಟಗಾರನಾಗಿ ಎಬಿಡಿ ಮೂಡಿಬಂದರು. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸುರೇಶ್ ರೈನಾ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಇದ್ದಾರೆ.


8/23/2020

IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !...

 13ನೇ ಆವೃತ್ತಿ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಕಾರಣಸದ್ಯ ದುಬೈನಲ್ಲಿ ಬೀಡುಬಿಟ್ಟಿರುವ ಕ್ರಿಕೆಟಿಗರು ಕ್ವಾರಂಟೈನ್‌ನಲ್ಲಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ದುಬೈನಲ್ಲಿ ವೈರಸ್ ನಿಯಂತ್ರಣದಲ್ಲಿದೆ.ಟೂರ್ನಿ ಆರಂಭದ ವೇಳೆ ಕೊರೋನಾ ಪರಿಸ್ಥಿತಿ ಅವಲೋಕರಿಸಲಿದ್ದೇವೆ. ಐಪಿಎಲ್ ಟೂರ್ನಿಯಿಂದ ಕೊರೋನಾ ಹರಡುವಿಕೆ ಅಂಕಿ ಅಂಶ ಪರಿಶೀಲಿಸಲಿದ್ದೇವೆ.ಇದರ ಆಧಾರದಲ್ಲಿ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ದುಬೈ ಸರ್ಕಾರದ ಅನುಮತಿ ಅಗತ್ಯ ಎಂದು ECB ಹೇಳಿದೆ.


ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

 ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದು ಬಂದಿದೆ. ಇದರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ಎಂ ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಶರ್ಮಾ ಜತೆ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!

  IPL ಟೂರ್ನಿ ರಂಗು ಕಳೆಗಟ್ಟಿದೆ. ಭಾರತದಲ್ಲಿ 13ನೇ ಆವೃತ್ತಿ IPL ಟೂರ್ನಿ ನಡೆಯದಿದ್ದರೂ ಭಾರತೀಯರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಕಾರಣ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗುತ್ತಿರುವ ಐಪಿಎಲ್ ಟೂರ್ನಿಗಾಗಿ ಇದೀಗ 8 ತಂಡಗಳು ದುಬೈಗೆ ತೆರಳಿದೆ. RCB ಕೂಡ ದುಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದೆ. ಇದೀಗ ದುಬೈನಲ್ಲಿರುವ RCB ತಂಡದ ಜೊತೆಗೆ ಫೇವರಿಟ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ,ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಸೇರಿಕೊಂಡಿದ್ದಾರೆ.


ಶುಕ್ರವಾರ(ಆ.21) ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಸೌತ್ ಆಫ್ರಿಕಾದಿಂದ ಆಗಮಿಸಿದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7 ದಿನಗಳ ಕಾಲ ಐಪಿಎಲ್ ತಂಡದ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.

ಹೊಸ ಮಾರ್ಗಸೂಚಿ, ನಿಯಮ ಹಾಗೂ ಮುಂಜಾಗ್ರತೆಗಳಿಂದ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಪ್ರಯಾಣ ಮಾಡಿದಂತೆ ಸಾಧ್ಯವಿಲ್ಲ. ಕೊರೋನಾ ವೈರಸ್ ಕಾರಣ ಎಚ್ಚರ ವಹಿಸಬೇಕಿದೆ. ಸದ್ಯ ಐಪಿಲ್ ಟೂರ್ನಿಗಾಗಿ ದುಬೈಗೆ ಆಗಮಿಸಿರುವುದು ಸಂತಸ ತಂದಿದೆ. ಉತ್ತಮ ಟೂರ್ನಿಯನ್ನು ಎದುರನೋಡುತ್ತಿದ್ದೇನೆ. ಜೊತೆಗೆ ತಂಡ ಸೇರಿಕೊಂಡಿರುವ ಹೊಸ ಮುಖಗಳನ್ನು ನೋಡಲು, ಅವರ ಜೊತೆ ಒಟ್ಟಾಗಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ತಂಡದ ವೇಗಿ ಡೇಲ್ ಸ್ಟೇನ್ ಕೂಡ ಮತ್ತೆ ಆರ್‌ಸಿಬಿ ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಉಷ್ಣತೆ ಇದೆ. ಈ ಬಿಸಿ ವಾತಾವರಣದಲ್ಲಿ ಪ್ರದರ್ಶನ ಸವಾಲಿನ ಕೆಲಸ ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. 

ಹಾಲಿ ಟೀಂ ಇಂಡಿಯಾ VS ಮಾಜಿ ಕ್ರಿಕೆಟರ್ಸ್ ಚಾರಿಟಿ ಪಂದ್ಯ: ದಿಗ್ಗಜರ ತಂಡ ಪ್ರಕಟಿಸಿದ ಇರ್ಫಾನ್!

 ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.


ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.

ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್‌ ಸ್ಥಾನ ಪಡೆದಿಲ್ಲ. ಕಾರಣ ಸಚಿನ್‌ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.

ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ

8/22/2020

ನಿವೃತ್ತಿಯಿಂದ ವಾಪಸ್ ಬನ್ನಿ: ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮನವಿ

 ಮುಂಬೈ: 2011 ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ವರ್ಷವಾಗುತ್ತಿದೆ. ಈ ನಡುವೆ ಅವರ ತವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ನಿವೃತ್ತಿ ನಿರ್ಧಾರದಿಂದ ಹಿಂದೆ ಬರುವಂತೆ ಒತ್ತಾಯಿಸಿದೆ.


ನಿವೃತ್ತಿಯಿಂದ ಹಿಂದೆ ಬಂದು ಮತ್ತೆ ತವರು ಪಂಜಾಬ್ ಪರ ಆಡುವಂತೆ ಕಾರ್ಯದರ್ಶಿ ಪುನೀತ್ ಬಾಲಿ ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಯುವಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಂಜಾಬ್ ತಂಡಕ್ಕೆ ಈಗ ಅನುಭವಿ ಆಟಗಾರರ ಕೊರತೆಯಿದೆ. ಯುವರಾಜ್ ರಂತಹ ಆಟಗಾರರು ಕಣಕ್ಕೆ ಇಳಿದರೆ ಪಂಜಾಬ್ ತಂಡ ಬಲಗೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ಅದೇ ಕಾರಣಕ್ಕೆ ಯುವಿಗೆ ನಿವೃತ್ತಿ ಬಿಟ್ಟು ವಾಪಸ್ ತಂಡಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

8/20/2020

ಧೋನಿಗೆ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಬಿಸಿಸಿಐ ಉತ್ಸುಕ

YouTube channel 

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿ "ಬಿಸಿಸಿಐ ಧೋನಿ ಜೊತೆ ಮಾತನಾಡಲಿದ್ದು, ಅದರ ನಂತರ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. 

ಈಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ಇಲ್ಲ. ಐಪಿಎಲ್ ನಂತರ ಏನು ಮಾಡಬೇಕೆಂಬ ಬಗ್ಗೆ ತೀರ್ಮಾನಿಸುತ್ತೇವೆ, ಏಕೆಂದರೆ ದೇಶಕ್ಕಾಗಿ ಧೋನಿ ಸಾಕಷ್ಟು ಮಾಡಿದ್ದಾರೆ, ಅವರು ಎಲ್ಲಾ ಗೌರವಗಳಿಗೂ ಅರ್ಹರು, ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಧೋನಿ ಭಿನ್ನ ಆಟಗಾರ ಅದರ ಬಗ್ಗೆ ಯಾರೂ ಯೋಚನೆಯನ್ನೂ ಮಾಡದ ಸಂದರ್ಭದಲ್ಲೇ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 

ಐಪಿಎಲ್ ವೇಳೆ ಧೋನಿ ಜೊತೆ ಬೀಳ್ಕೊಡುಗೆ ಪಂದ್ಯದ ಬಗ್ಗೆ ಮಾತನಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. 


Fore more information visit our YouTube channel

https://youtu.be/ywCCXO30OQA

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...