- NEWS18 KANNADA
- LAST UPDATED: JULY 27, 2020, 12:49 PM IST
This page gives latest and fast update of news in kannada and english sports news, sports news today, sports news malayalam, sports news live, sports news telugu, sports news today malayalam, sports news tamil, sports news in english, sports news 24, sports news channel
7/29/2020
ಐಸಿಸಿ ಏಕದಿನ ರ‍್ಯಾಕಿಂಗ್: ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನಗಳನ್ನು ಕಾಯ್ದುಕೊಂಡ ಕೊಹ್ಲಿ,ರೋಹಿತ್
ನವದೆಹಲಿ: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟವಾಗಿದ್ದು, ಟೀಂ ಇಂಡಿಯಾ ನಾಕಯ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ನಂಬರ್1 ಹಾಗೂ ನಂಬರ್ 2 ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.
ಮಂಗಳವಾರ ಬಿಡುಗಡೆಯಾದ ರ‍್ಯಾಕಿಂಗ್ ಪಟ್ಟಿಯಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.
871 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ 855 ಅಂಕಗಳೊಂದಿಗೆ ರೋಹಿತ್ ಎರಡನೇ ಸ್ಥಾನ, 829 ಅಂಕಗಳೊಂದಿಗೆ ಪಾಕಿಸ್ತಾನದ ಬಾಬರ್ ಅಜಂ ಮೂರನೇ ಸ್ಥಾನದಲ್ಲಿದ್ದಾರೆ.
ಬೌಲರ್ ವಿಭಾಗದಲ್ಲಿ 722 ಅಂಕಗಳೊಂದಿಗೆ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದರೆ, 719 ಅಂಕಗಳೊಂದಿಗೆ ಭಾರತದ ಜಸ್ಪ್ರೀತ್ ಬೂಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. 701 ಅಂಕಗಳೊಂದಿಗೆ ಅಪ್ಘಾನಿಸ್ತಾದ ಮುಜಿಬ್ ಉರ್ ರೆಹಮಾನ್
ಮೂರನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ಅಲ್ ರೌಂಡರ್ ಗಳ ಪಟ್ಟೆಯಲ್ಲಿ ಭಾರತದ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅಪ್ಘಾನಿಸ್ತಾನದ ಮೊಹಮ್ಮದ್ ನಬಿ ಪ್ರಥಮ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
7/28/2020
BCCI shares detailed plan for IPL 2020 in UAE
The Indian Premier League's governing council will meet on Saturday via teleconference, followed by a meeting with their primary stakeholders - franchise owners, broadcasters and central sponsors - on Sunday and Monday. The meetings will chart out the "final plan" for the tournament in UAE starting September 19. The BCCI shared its plans with TOI on Monday
1Bio-secure bubble: Each franchise will create its own bubble in which the team will only be interacting with a limited number of people in their ecosystem or allotted to them by BCCI. A similar bubble will be created for the Indian cricket board and the IMG staff, broadcasters etc. Nobody will be allowed to interact with individuals outside their bubble except through pre-appointed coordinators.
2 Revenue pools: Since all 60 IPL matches are being played in 51 days, there will be no change in the distribution of BCCI's central revenue pool.
3 Gate money: Had the IPL not happened, franchises wouldn't be looking at any income. Letting go of gate money, the board says, is "pittance".
3 Travel & accommodation: Franchises will have to figure their own travel arrangements and accommodation in UAE. BCCI will coordinate with UAE to ensure "discounted hotel rates" and share it with the franchises. It will be the franchise's discretion to settle for options provided by BCCI or make their own arrangements. Franchises will fly their players to UAE and back, as is the case during IPL in India.
4Medical assistance: Franchises will arrange for their own medical teams and the BCCI will arrange a central medical team. Once players & support staff land in UAE, the onus of testing will be on the franchises, who will, in turn, coordinate with BCCI's medical team on a 24x7 basis. Each franchise's medical team will stay with their respective teams within the security replacembubble.
5Playerent & loaning: There will be no change in the player policy and the franchises will be free to travel with extra players so as to avoid last-minute travels.
The board and governing council are working on details to prepare a draft on these policies that will be discussed at Saturday's meeting and then shared with the franchises. "Once we share what we do with the franchises, we know there will be questions. We need to be thoroughly prepared," said GC chairman Brijesh Patel.
ಆರ್‌ಸಿಬಿ ಈ ಬಾರಿಯ ಚಾಂಪಿಯನ್: ಬಲಿಷ್ಠ ಕಾರಣಗಳನ್ನು ಹೇಳಿದ ಆಸಿಸ್ ದಿಗ್ಗಜ
ಈ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡುವ ಹೇಳಿಕೆಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ನೀಡಿದ್ದಾರೆ. ಕಳೆದ 12 ಐಪಿಎಲ್ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿರುವ ಆರ್‌ಸಿಬಿ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್.
ಆರ್‌ಸಿಬಿ ತಂಡ ಕಾಗದದಲ್ಲಿ ಯಾವಾಗಲೂ ಬಲಿಷ್ಠವಾಗಿಯೇ ಇರುವ ತಂಡ. ಆದರೆ ಆರ್‌ಸಿಬಿಗೆ ಚಾಂಪಿಯನ್ ಆಗುವ ಅವಕಾಶ ಈವರೆಗೆ ದೊರೆತಿಲ್ಲ. ಆದರೆ ಈ ಬಾರಿ ಅದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರುವ ಸಾಧ್ಯತೆಯಿರುವ ಮತ್ತೊಂದು ತಂಡ ಎಂದಿದ್ದಾರೆ ಬ್ರಾಡ್ ಹಾಗ್.
ಆರ್‌ಸಿಬಿ ತಂಡಕ್ಕೆ ಈ ಬಾರಿ ಆರೋನ್ ಫಿಂಚ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಅವರು ಬೌಲರ್‌ಗಳ ಮೇಲೆ ಸವಾರಿ ಮಾಡಲಿದ್ದಾರೆ. ಈ ವೇಳೆ ಸಾಕಷ್ಟು ರನ್ ಗಳಿಸಿ ಮಧ್ಯಮ ಕ್ರಮಾಂಕದ ಒತ್ತಡವನ್ನು ಕಡಿಮೆಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರು ಎದುರಾಳಿಗಳನ್ನು ದಂಡಿಸಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಬಲಿಷ್ಠವಾಗಿದೆ. ಡೇಲ್ ಸ್ಟೇನ್ ಹಾಗೂ ಕೇನ್ ರಿಚರ್ಡ್‌ಸನ್ ತಂಡದ ಸಮತೋಲನವನ್ನು ಈ ಹಿಂದಿನ ಟೂರ್ನಿಗಿಂತ ಹೆಚ್ಚುಗೊಳಿಸಲಿದ್ದಾರೆ. ಮಾತ್ರವಲ್ಲದೆ ಈ ಹಿಂದಿನ ಟೂರ್ನಿಯಲ್ಲಿ ಮಾಡಿದ ರಣತಂತ್ರಕ್ಕಿಂತ ಬೇರೆಯದ್ದೇ ರಣತಂತ್ರವನ್ನು ಹೆಣೆಯಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.
BCCI ಅಂಗೀಕಾರ ಪತ್ರ ಪಡೆದ UAE: IPL T20 ಆಯೋಜನೆಗೆ ಲಭಿಸಿತು ಅಧಿಕೃತ ಚಾಲನೆ
ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ಗೆ (ಇಸಿಬಿ) ಬಿಸಿಸಿಐ ಅಂಗೀಕಾರ ಪತ್ರವನ್ನು ರವಾನಿಸಿದೆ.
ಇದನ್ನು ಸ್ವೀಕರಿಸಿದ್ದಾಗಿ ಇಸಿಬಿ ಹೇಳುವುದರೊಂದಿಗೆ 2020ನೇ ಸಾಲಿನ ಐಪಿಎಲ್ ಸಂಘಟನೆಗೆ ಅಧಿಕೃತ ಚಾಲನೆ ಲಭಿಸಿದಂತಾಗಿದೆ.
ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ಐಪಿಎಲ್ ನಡೆಸುವುದು ಅಸಾಧ್ಯವಾದರೆ ಅದನ್ನು ತಾನು ಸಂಘಟಿಸುವುದಾಗಿ ಯುಎಇ ಮುಂದೆ ಬಂದಿತ್ತು.
ಆದರೆ ಇದಕ್ಕೆ ಬಿಸಿಸಿಐ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮೂರು ದಿನಗಳ ಹಿಂದೆ ಐಪಿಎಲ್ ಚೇರ್ಮನ್ ಬೃಜೇಶ್ ಪಟೇಲ್ ಕೂಟದ ದಿನಾಂಕವನ್ನು ಪ್ರಕಟಿಸುವುದರ ಜತೆಗೆ ಇದನ್ನು ಪೂರ್ಣ ಪ್ರಮಾಣದಲ್ಲಿ ಯುಎಇಯಲ್ಲಿ ನಡೆಸಲಾಗುವುದು ಎಂದಿದ್ದರು.
ಇದನ್ನು ಯುಎಇ ಸ್ವಾಗತಿಸಿತ್ತು. ಆದರೆ ರವಿವಾರವಷ್ಟೇ ಪ್ರತಿಕ್ರಿಯಿಸಿದ ಇಸಿಬಿ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ, ಕೂಟಕ್ಕೆ ನಾವು ಸಜ್ಜಾಗಿದ್ದೇವೆ, ಆದರೆ ಬಿಸಿಸಿಐಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದರು. ಇದೀಗ ಇತ್ಯರ್ಥಗೊಂಡಿದೆ. ಅಂಗೀಕಾರ ಪತ್ರ ರವಾನಿಸಿದ್ದಾಗಿ ಬೃಜೇಶ್ ಪಟೇಲ್ ನೀಡಿದ ಹೇಳಿಕೆಯನ್ನು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
‘ನಮಗೆ ಬಿಸಿಸಿಐಯಿಂದ ಪತ್ರ ಬಂದಿದೆ. ಇನ್ನು ಭಾರತ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಾವು ಮುಂದುವರಿಯಲಿದ್ದೇವೆ’ ಎಂದು ಉಸ್ಮಾನಿ ಹೇಳಿದ್ದಾರೆ.
ಸುರಕ್ಷಿತ ಅಭ್ಯಾಸ
ಐಪಿಎಲ್‌ನಲ್ಲಿ ಭಾಗವಹಿಸಲಿರುವ ಎಲ್ಲ ತಂಡಗಳ ಆಟಗಾರರು ಜೈವಿಕ ಸುರಕ್ಷಾ ವಲಯದಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಬೃಜೇಶ್ ಪಟೇಲ್ ಹೇಳಿದ್ದಾರೆ. ಪಂದ್ಯಾವಳಿಗೂ ಮುನ್ನ ಆಟಗಾರರೆಲ್ಲ ಯುಎಇಯಲ್ಲಿ 3ರಿಂದ 4 ವಾರಗಳ ತನಕ ಅಭ್ಯಾಸ ಮಾಡುವರೆಂದೂ ಪಟೇಲ್ ತಿಳಿಸಿದರು.
ಮೂಲ ವೇಳಾಪಟ್ಟಿ ಪ್ರಕಾರ ಈ ವರ್ಷದ ಐಪಿಎಲ್ ಮಾ. 29ರಂದು ಮುಂಬೈ-ಚೆನ್ನೈ ಮುಖಾಮುಖಿಯೊಂದಿಗೆ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19ನಿಂದಾಗಿ ಕೂಟ ಮುಂದೂಡಲ್ಪಟ್ಟಿತು.
ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ವರ್ಷಾಂತ್ಯದ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್‌ಗೆ ಕಿಂಡಿಯೊಂದು ತೆರೆಯಲ್ಪಟ್ಟಿತು. ಅದರಂತೆ 51 ದಿನಗಳ ಈ ಹಣಾಹಣಿಯನ್ನು ಸೆ. 19ರಿಂದ ನ. 8ರ ತನಕ ಯುಎಇಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
7/27/2020
IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್‌ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?
ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು
ಇಂಡಿಯರ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ. ಅದೊಂದು ಹಬ್ಬವಿದ್ದಂತೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಈಗ ಮುಹೂರ್ತ ಕೂಡಿಬಂದಿದ್ದು ಇದೇ ವರ್ಷ ವಿದೇಶದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 18ಕ್ಕೆ 13ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ಸಿಗಲಿದ್ದು, ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.
IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್‌ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?
ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.
ಮನೀಶ್ ಪಾಂಡೆ: 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದ ಮನೀಶ್ ಪಾಂಡೆ ಅಮೋಘ ಪ್ರದರ್ಶನ ನೀಡಿದ್ದರು.
ಯುಎಇನಲ್ಲಿ ನಡೆದ 5 ಪಂದ್ಯಗಳಲ್ಲಿ ಪಾಂಡೆ 144 ರನ್ ಬಾರಿಸಿದ್ದರು. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲೇ 64 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.
ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್ ಅಭಿಯಾನ ಆರಂಭಿಸಿದ ಡೇವಿಡ್ ವಾರ್ನರ್ ತನ್ನ ಚೊಚ್ಚಲ ಸೀಸನ್ನಲ್ಲೇ ಅಪಾಯಕಾರಿಯಾಗಿ ಗೋಚರಿಸಿದರು.
ಯುಎಇನಲ್ಲಿ ನಡೆದ ಮೊದಲ 5 ಪಂದ್ಯಗಳಲ್ಲೇ ವಾರ್ನರ್ 163 ರನ್ ಕಲೆಹಾಕಿದರು. 112 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದರು ಎಂಬುದು ಮತ್ತೊಂದು ವಿಶೇಷ.
ಆ್ಯರೋನ್ ಫಿಂಚ್: 2014 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಆಸೀಸ್ ಆಟಗಾರ ಆ್ಯರೋನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು.
ಆಡಿದ 5 ಪಂದ್ಯಗಳಲ್ಲಿ ಫಿಂಚ್ ಅವರು 127 ಸ್ಟ್ರೈಕ್ರೇಟ್ನಲ್ಲಿ 169 ರನ್ ಕಲೆಹಾಕಿದ್ದರು. ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲಿರುವ ಫಿಂಚ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.
ಅಜಿಂಕ್ಯಾ ರಹಾನೆ: ಪ್ರತಿಭಾನ್ವಿತ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ 2104ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರಹಾನೆ ಮೊದಲ ಎರಡು ಪಂದ್ಯಗಳಲ್ಲೇ ಅರ್ಧಶತಕ ಸಿಡಿಸಿದ್ದರು.
ಆಡಿದ ಒಟ್ಟು 5 ಪಂದ್ಯಗಳಲ್ಲಿ ರಹಾನೆ 182 ರನ್ ಕಲೆಹಾಕಿ ಗರಿಷ್ಠ ರನ್ ಕಲೆಹಾಕಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್: 2104 ರಲ್ಲಿ ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಆರ್ಭಟಿಸಿದ್ದು ಆಸೀಸ್ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದ ಮ್ಯಾಕ್ಸ್ವೆಲ್ ಕೇವಲ 5 ಇನ್ನಿಂಗ್ಸ್ನಲ್ಲಿ 201 ಸ್ಟ್ರೈಕ್ರೇಟ್ ಮೂಲಕ 300 ರನ್ ಚಚ್ಚಿದ್ದರು.
ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...
-
IPL 2020: Finch comes with the experience of having played 61 T20Is for Australia, 75 matches in the IPL and another 62 in the Big Bash Le...
-
ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ....