9/29/2020

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆಯೇ ಸಂಜು ಸ್ಯಾಮ್ಸನ್ ಆಟವನ್ನು ಕೇರಳದ ಕಾಂಗ್ರೆಸ್ ಎಂಪಿ ಶಶಿ ತರೂರ್ ಕೂಡ ಕೊಂಡಾಡಿದ್ದರು. ಭವಿಷ್ಯದ ಧೋನಿ ಸಂಜು ಸ್ಯಾಮ್ಸನ್ ಎಂದು ಬಣ್ಣಿಸಿದ್ದರು.


ಆದರೆ ಸಂಜು ಸ್ಯಾಮ್ಸನ್ ಬ್ಯಾಟಿಂಗನ್ನು ಧೋನಿಗೆ ಹೋಲಿಸಿದಕ್ಕೆ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಈಗ ಮತ್ತೋರ್ವ ಕ್ರಿಕೆಟಿಗ ಶ್ರೀಶಾಂತ್ ಕೂಡ ಶಶಿ ತರೂರ್ ಬಣ್ಣನೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆತ ಮುಂದಿನ ಧೋನಿ ಅಲ್ಲ. ಆತ ಏಕೈಕ ಸಂಜು ಸ್ಯಾಮ್ಸನ್ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ

ಶಶಿ ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ಶ್ರೀಶಾಂತ್ "ಆತ ಭವಿಷ್ಯದ ಧೋನಿ ಅಲ್ಲ. ಈತ ಏಕೈಕ ಸಂಜು ಸ್ಯಾಮ್ಸನ್. ಈತ 2015ರಿಂದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಿರಂತರವಾಗಿ ಆಡುತ್ತಿರಬೇಕಾಗಿತ್ತು. ಯಾರೊಂದಿಗೂ ಆತನನ್ನು ಹೋಲಿಕೆ ಮಾಡಬೇಡಿ. ಸರಿಯಾದ ಅವಕಾಶವನ್ನು ಆತನಿಗೆ ನೀಡಿದ್ದರೆ ಭಾರತ ತಂಡಕ್ಕೂ ಇದೇ ರೀತಿ ಆಡುತ್ತಿದ್ದರು ಹಾಗೂ ವಿಶ್ವಕಪ್ ಗೆಲ್ಲುತ್ತಿದ್ದರು" ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.


ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಂಜು ಸ್ಯಾಮ್ಸನ್ ಆಟವನ್ನು ಹೊಗಳುತ್ತಾ ಶಶಿ ತರೂರ್ ''ರಾಜಸ್ಥಾನ್ ರಾಯಲ್ಸ್‌ ಸಂಪೂರ್ಣವಾಗಿ ನಂಬಲಾಗದ ಗೆಲುವು ಕಂಡಿದೆ. ಸಂಜು ಸ್ಯಾಮ್ಸನ್ ಅವರನ್ನು ದಶಕದಿಂದ ತಿಳಿದಿದ್ದೇನೆ. ಆತ 14 ವರ್ಷದವನಿದ್ದಾಗ ಅವನಿಗೆ ನೀನು ಮುಂದಿನ ಧೋನಿ ಆಗಲಿದ್ದೀಯ ಎಂದು ಹೇಳಿದ್ದೆ. ಆ ದಿನ ಇಲ್ಲಿದೆ. ಅವನ ಈ ಎರಡು ಅದ್ಭುತ ಐಪಿಎಲ್ ಇನ್ನಿಂಗ್ಸ್ ವಿಶ್ವ ದರ್ಜೆಯ ಆಟಗಾರನೊಬ್ಬ ಬಂದಿದ್ದಾನೆಂದು ನಿಮಗೆ ತಿಳಿಸುತ್ತಿದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು

.ಇದಕ್ಕೆ ಗೌತಮ್ ಗಂಭೀರ್ "ಸಂಜು ಸ್ಯಾಮ್ಸನ್ ಅವರನ್ನು ಯಾರೊಂದಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್‌ನ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾರೆ ಎಂದು ಟ್ವೀಟ್ ಮೂಲಕ ತರೂರ್ ಬಣ್ಣನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಐಪಿಎಲ್ 2020: ಸಿಕ್ಸ್‌ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ದಾಖಲೆ

 ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಸ್‌ಗಾಗಿ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿ ಶರ್ಮಾ ಗುರುತಿಸಿಕೊಂಡಿದ್ದಾರೆ. ಎಂಐ ಪರ ರೋಹಿತ್ 150 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ.

ಮುಂಬೈ ಇಂಡಿಯನ್ಸ್ ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಪೊಲಾರ್ಡ್ ಒಟ್ಟಾರೆ 151 ಪಂದ್ಯಗಳಲ್ಲಿ 182 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಸೋಮವಾರ (ಸೆಪ್ಟೆಂಬರ್ 8) ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಹಿತ್ 8 ಎಸೆತಗಳಿಗೆ 1 ಸಿಕ್ಸ್‌ ಕೂಡ ಸೇರಿ 8 ರನ್ ಬಾರಿಸಿ ಔಟಾದರು. ಇದರೊಂದಿಗೆ ರೋಹಿತ್ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪಿಸಲ್ಪಟ್ಟಿದೆ.

ಐಪಿಎಲ್‌ನಲ್ಲಿ 200+ ಸಿಕ್ಸರ್‌ಗಳನ್ನು ಬಾರಿಸಿದ 4ನೇ ಬ್ಯಾಟ್ಸ್‌ಮನ್‌ ಆಗಿಯೂ ರೋಹಿತ್ ಗುರುತಿಸಿಕೊಂಡಿದ್ದಾರೆ. ರೋಹಿತ್ ಬಿಟ್ಟರೆ ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಮತ್ತು ಎಂಎಸ್ ಧೋನಿ ಈ ಪಟ್ಟಿಯಲ್ಲಿದ್ದಾರೆ. ಅಂದ್ಹಾಗೆ ಎಂಐ vs ಆರ್‌ಸಿಬಿ ಪಂದ್ಯ 201 ರನ್‌ಗಳಿಂದ ಸಮಬಲಗೊಂಡಿತ್ತು. ಸೂಪರ್ ಓವರ್‌ನಲ್ಲಿ ಬೆಂಗಳೂರು ಗೆದ್ದಿತು.

ಸೂಪರ್ ಓವರ್‌ನಲ್ಲಿ ಡಿವಿಲಿಯರ್ಸ್, ಕೊಹ್ಲಿ ಮೋಡಿ- ಆರ್‌ಸಿಬಿಗೆ ಜಯ

 ದುಬೈ: ಆರಂಭಿಕ ಹಂತದಲ್ಲಿ ಎಡವಿದ್ದ ಮುಂಬೈ ತಂಡವನ್ನು ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಒಂದು ಹಂತಕ್ಕೆ ತಂದಿದ್ದರು. ಆದರೂ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ತಲುಪಿತು. ಸೂಪರ್ ಓವರ್ ನಲ್ಲಿ ಆರ್ ಸಿಬಿ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯಲಕ್ಷ್ಮಿಯನ್ನು ತನ್ನದಾಗಿಸಿಕೊಳ್ಳಿತು.



ಆರ್ ಸಿಬಿ ನೀಡಿದ್ದ 202ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದ ಮೂರು ಓವರ್ ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೂರು ಓವರ್‍ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಮುಗ್ಗರಿಸಿತು. ಆರಂಭಿಕ ಆಟಗಾರ ಕಿಶನ್ 58 ಬಾಲ್‍ಗೆ 99 ರನ್ ಗಳಿಸಿದರು. ಅದ್ಭುತ ಪ್ರದರ್ಶನದಿಂದಾಗಿ ಒಂದು ಹಂತಕ್ಕೆ ತಲುಪಿತು. ಆದರೆ ಕಿಶನ್ ಹಾಗೂ ಪೋಲಾರ್ಡ್ ಪ್ರಯತ್ನ ವಿಫಲವಾಯಿತು. ಹೀಗಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಹಂತ ತಲುಪಿತು.

ಸೂಪರ್ ಓವರ್ ನಲ್ಲಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ಪೋಲಾರ್ಡ್ ನಾಲ್ಕನೇ ಬಾಲ್‍ಗೆ ಫೋರ್ ಬಾರಿಸಿದರೆ, ಐದನೇ ಬಾಲ್‍ಗೆ ಕ್ಯಾಚ್ ನೀಡಿದರು. ನಂತರ 7 ರನ್ ಬಾರಿಸಿ ಆರ್‍ಸಿಬಿಗೆ 8ರನ್‍ಗಳ ಟಾರ್ಗೆಟ್ ನೀಡಿದರು. ಮುಂಬೈ ಪರ ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಟವಾಡಿದರು. ಆರಂಭದ ಎರಡು ಬಾಲ್ ಸಿಂಗಲ್ಸ್ ನಂತರ ನಾಲ್ಕನೇ ಬಾಲ್‍ಗೆ ಡಿವಿಲಿಯರ್ಸ್ ಬೌಂಡರಿ ಬಾರಿಸಿದರು. ಮತ್ತೆ ಐದನೇ ಬಾಲ್ ಸಿಂಗಲ್ ತೆಗೆದುಕೊಂಡರೆ, ಕೊನೆಯ ಬಾಲ್‍ಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.


ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಸೂಪರ್ ಓವರ್ ಕದನದಲ್ಲಿ ಗೆದ್ದ ಬೆಂಗಳೂರು ಕೂಟದ ಎರಡನೇ ಗೆಲುವು ಸಾಧಿಸಿದೆ.



ಆಕರ್ಷಕ ಅರ್ಧಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ನಲ್ಲಿ 4500 ರನ್ ಗಡಿ ದಾಟಿದ ಎರಡನೇ ವಿದೇಶಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳನ್ನು ಎದುರಿಸಿದ ಎಬಿಡಿ ಅಜೇಯ 55 ರನ್ ಬಾರಿಸಿದ್ದರು. ನಾಲ್ಕು ಸಿಕ್ಸರ್ ನಾಲ್ಕು ಬೌಂಡರಿ ಬಾರಿಸಿದ ಎಬಿಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಸಹಾಯಕವಾಗಿದ್ದರು.

ಐಪಿಎಲ್ ನಲ್ಲಿ 4500 ರನ್ ಬಾರಿಸಿದ ಆರನೇ ಆಟಗಾರ, ಎರಡನೇ ವಿದೇಶಿ ಆಟಗಾರನಾಗಿ ಎಬಿಡಿ ಮೂಡಿಬಂದರು. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸುರೇಶ್ ರೈನಾ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಇದ್ದಾರೆ.


ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...